Sunday , September 20 2020
Breaking News

अभी-अभी

ಪ್ರೇಕ್ಷಕರಿಲ್ಲದ ಮೈದಾನದಲ್ಲಿ 13ನೇ ಆವೃತ್ತಿಯ ಐಪಿಎಲ್ ಆರಂಭ

ಅಬುಧಾಬಿ : ಕೋವಿಡ್ -19 ಆತಂಕದ ನಡುವೆಯೂ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ಐಪಿಎಲ್ 2020 ಟೂರ್ನಿ ಭರ್ಜರಿಯಾಗಿ ಆರಂಭವಾಗಿದೆ.ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಉದ್ಘಾಟನಾ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕ್ರಿಕೆಟ್ ಪಂದ್ಯವೆಂದರೆ ಮೈದಾನದ ಸುತ್ತ ಪ್ರೇಕ್ಷಕರ ಹವಾ ಇರುತ್ತದೆ. ಆಟಗಾರರನ್ನು ಹುರಿದುಂಬಿಸುವ ಜೊತೆಗೆ ಟಿ.ವಿ ಮೂಲಕ ಪಂದ್ಯ ವೀಕ್ಷಿಸುವವರೂ ಮನರಂಜನೆ ಹೆಚ್ಚಿಸುತ್ತಾರೆ. ...

Read More »

ಕರ್ನಾಟಕ ಹಾಗೂ ಕೇರಳ ಕರಾವಳಿ ಪ್ರದೇಶದಲ್ಲಿ ರೆಡ್ ಅಲರ್ಟ್

ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ, ಕಾಸರಗೋಡು ಸಹಿತ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಬರುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.ಇಡುಕ್ಕಿ, ಮಲಪ್ಪುರಂ, ಕಣ್ಣೂರು ಜಿಲ್ಲೆಗಳಲ್ಲೂ ಭಾರಿ ಮಳೆಯಾಗುವ ಸಂಭವವಿದೆ.ಭಾನುವಾರವೂ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತೀರ ಪ್ರದೇಶ, ಗುಡ್ಡ ಪ್ರದೇಶದಲ್ಲಿ ವಾಸಿಸುವ ಜನರಿಗೆ ವಿಶೇಷವಾಗಿ ಜಾಗ್ರತೆ ವಹಿಸುವುದು ಅಗತ್ಯ ಎಂದು ವಿಪತ್ತು ನಿರ್ವಹಣಾ ತಂಡ ಹೇಳಿದೆ.ಅಷ್ಟೆ ಅಲ್ಲದೆ ಮಲೆನಾಡ ಪ್ರದೇಶಗಳಲ್ಲಿ ...

Read More »

ಡ್ರಗ್ಸ್ ಪ್ರಕರಣ : ಡ್ಯಾನ್ಸರ್ ಕಿಶೋರ್ ಶೆಟ್ಟಿ ‌ಬಂಧನ

ಮಂಗಳೂರು: ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ನಟನೊಬ್ಬನನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ಮಂಗಳೂರು ಸಿಸಿಬಿ ಪೊಲೀಸರಿಂದ ಇಂದು ಡ್ರಗ್ಸ್ ಸಾಗಿಸುತ್ತಿದ್ದ ಡ್ಯಾನ್ಸರ್ ಕಿಶೋರ್ ಶೆಟ್ಟಿಯನ್ನು ಬಂಧಿಸಿದ್ದಾರೆ.ಕಿಶೋರ್ ಶೆಟ್ಟಿ ಓರ್ವ ಡ್ಯಾನ್ಸರ್ ಆಗಿದ್ದು, ಖಾಸಗಿ ವಾಹಿನಿಯ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದರು. ಬಾಲಿವುಡ್ ಎಬಿಸಿಡಿ ಸಿನಿಮಾದಲ್ಲಿ ಕಿಶೋರ್ ಶೆಟ್ಟಿ ಅಭಿನಯಿಸಿದ್ದಾರೆ. ಪ್ರಕರಣದಲ್ಲಿ ಮತ್ತೋರ್ವನನ್ನು ಬಂಧಿಸಲಾಗಿದ್ದು, ಅಕೀಲ್ ನೌಶೀಲ್ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ಮುಂಬೈನಿಂದ ನಿಷೇಧಿತ ಮಾದಕ ವಸ್ತುವನ್ನು ತಂದು ಮಂಗಳೂರು ಪರಿಸರದಲ್ಲಿ ...

Read More »

ಶಿಕ್ಷಣ ಸಚಿವರಿಗೂ ಕೋವಿಡ್ ದೃಢ

ಬೆಂಗಳೂರು: ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ. ಎನ್ ಅಶ್ವಥ್ ನಾರಾಯಣ್ ಅವರಿಗೆ ಕೊವಿಡ್ 19 ಸೋಂಕು ದೃಢಪಟ್ಟಿದೆ. ಈ ಕುರಿತು ಸ್ವತಃ ಅವರೇ ಟ್ವೀಟ್ ಮಾಡಿದ್ದಾರೆ,ವಿಧಾನ ಪರಿಷತ್ ಅಧಿವೇಶನ ಪ್ರಾರಂಭ ಆಗುವ ಹಿನ್ನೆಲೆಯಲ್ಲಿ ನಾನು ತಪಾಸಣೆಗೆ ಒಳಪಟ್ಟಿದ್ದೇನೆ. ಈ ವೇಳೆ ಸೋಂಕು ಇರುವುದು ಪತ್ತೆಯಾಗಿದೆ, ನಾನು ಆರೋಗ್ಯವಾಗಿದ್ದು, ಮನೆಯಲ್ಲೇ ಪ್ರತ್ಯೇಕ ವಾಗಿರುತ್ತೇನೆ ಎಂದಿದ್ದಾರೆ.ಸೋಮವಾರದಿಂದ ವಿಧಾನ ಮಂಡಲ ಅಧಿವೇಶನ ಪ್ರಾರಂಭ ಆಗುವ ಹಿನ್ನೆಲೆಯಲ್ಲಿ ಇಂದು ಎಲ್ಲ ಶಾಸಕರಿಗೂ ಕೊವಿದ್ ...

Read More »

ಕಹಿ ಬೇವಿನ ಸಿಹಿ ಗುಣಗಳು

ಕಹಿ ಬೇವು ಅಂದ್ರೆ ಮೂಗು ಮುರಿಯೋ ಜನರೇ ಹೆಚ್ಚು, ಯುಗಾದಿಗೆ ಕಹಿ ಬೇವು ತಿನ್ಬೇಕು ಅಂದ್ರೂ, ” ಅಯ್ಯೋ ಕಹಿ ಎಲ್ಲ ಬೇಡಪ್ಪ” ಅಂತ ಓಡಿ ಹೋಗುತ್ತಾರೆ ಇಂದಿನ ಮಕ್ಕಳು. ಇನ್ನೊಂದು ತಮಾಷೆ ಎಂದರೆ , ಬೇಡ ಅಂದ ಕಹಿಬೇವಿನ ಬ್ಯೂಟಿ ಪ್ರಾಡಕ್ಟ್ ನ್ನು ದುಬಾರಿ ಬೆಲೆ ತೆತ್ತು ಮಾರುಕಟ್ಟೆಯಿಂದ ತರುತ್ತಾರೆ, ಅದೂ ಸಹ ಕೃತಕ ಹಾಗೂ ಕೆಮಿಕಲ್ ಮಿಶ್ರಿತ ಉತ್ಪನ್ನಗಳು. ಟಿವಿ ನೋಡಿದರೆ ಗೊತ್ತಾಗುತ್ತೆ, ಪೇಸ್ಟ್, ಸೋಪ್, ಕ್ರೀಮ್, ...

Read More »