ನಮ್ಮ ವಿವಿಧ ಅಗತ್ಯಗಳಿಗೆ ಹೊಸ ಹೊಸ ಆಪ್ ಡೌನ್ಲೋಡ್ ಮಾಡಿ ಇಡುತ್ತೇವೆ. ಆದರೆ ಕೆಲವು ಆಪ್ ಗಳು ನಮ್ಮ ಖಾಸಗಿ ಮಾಹಿತಿಯನ್ನು ಕದಿಯುತ್ತವೆ. ಇತ್ತೀಚಿಗೆ ಇದು ಜಾಸ್ತಿ ಆಗಿದೆ.ಕಳೆದ ತಿಂಗಳು 118 ಆಪ್ ಬ್ಯಾನ್ ಆಗಿದ್ದು ಗೊತ್ತೇ ಇದೆ. ಇದೀಗ ಮತ್ತೆ ಕೆಲವು ಆಪ್ ಬ್ಯಾನ್ ಆಗಲಿವೆ
ಕ್ಯಾಲಿಫೋರ್ನಿಯಾ ಮೂಲದ ಐಟಿ ಸೆಕ್ಯುರಿಟಿ ಫರ್ಮ್ ನೀಡಿದ ಸಂಶೋಧನೆಯ ವರದಿ ಬಳಿಕ ಗೂಗಲ್ ಪ್ಲೇ ಸ್ಟೋರ್ 17 ಅಪಾಯಕಾರಿ ಆ್ಯಪ್ಗಳನ್ನು ತೆಗೆದುಹಾಕಿದೆ. ಸ್ಟೈಲ್ ಫೋಟೋ ಕೊಲ್ಯಾಜ್, ಮೆಟಿಕ್ಯುಲಸ್ ಸ್ಕ್ಯಾನರ್, ಡಿಸೈರ್ ಟ್ರಾನ್ಸ್ಲೇಟ್, ಟ್ಯಾಲೆಂಟ್ ಫೋಟೋ ಎಡಿಟರ್, ಮಿಂಟ್ ಲೀಫ್ ಮೆಸೇಜ್, ಡೈರೆಕ್ಟ್ ಮೆಸೆಂಜರ್, ಪ್ರೈವೇಟ್ ಎಸ್ಎಂಎಸ್, ಪೇಪರ್ ಡಾಕ್ಯುಮೆಂಟ್ ಸ್ಕ್ಯಾನರ್, ಬ್ಲೂ ಸ್ಕ್ಯಾನರ್, ಹ್ಯಾಮಿಂಗ್ಬರ್ಡ್ ಪಿಡಿಎಫ್ ಸಿ, ಕೇರ್ ಮೆಸೇಜ್, ಪಾರ್ಟ್ ಮೆಸೇಜ್, ಆಲ್ ಗುಡ್ ಪಿಡಿಎಫ್ ಸ್ಕ್ಯಾನರ್, ಒನ್ ಸೆಂಟೆನ್ಸ್ ಟ್ರಾನ್ಸಲೇಟರ್ ಮುಂತಾದ ಆ್ಯಪ್ಗಳನ್ನು ಗೂಗಲ್ ಪ್ಲೇಸ್ಟೋರ್ನಿಂದ ಡಿಲೀಟ್ ಮಾಡಲಾಗಿದೆ.
ತೇಜಸ್ವಿನಿ ಆರ್ ಕೆ
