ಇಂದು ಎಲ್ಲರೂ ತಮ್ಮ ತಮ್ಮ ಸೌಂದರ್ಯ ಪ್ರಜ್ಞೆಯ ಬಗ್ಗೆ ಚರ್ಚಿಸುತ್ತಾರೆ. ಅದಕ್ಕಾಗಿಯೇ ಸಾವಿರಾರು ರುಪಾಯಿ ಖರ್ಚು ಮಾಡುತ್ತಾರೆ.ಆದರೆ ಮನೆಯಲ್ಲೇ ಇದ್ದಂತಹ ಅನೇಕ ವಸ್ತುಗಳನ್ನು ಬಳಸಿ ತ್ವಚೆಗೆ ಸಂರಕ್ಷಣೆ ನೀಡಬಹುದು ಎಂದು ಗೊತ್ತಿಲ್ಲ.

1. ನೀಮ್ ಫೇಸ್ ಪ್ಯಾಕ್:
ಸ್ವಲ್ಪ ಕಹಿ ಬೆವನ್ನು ತೆಗೆದುಕೊಂಡು ನೀರು ಹಾಕಿ ಮಿಕ್ಸ್ ಮಾಡಿಕೊಂಡು ಅದಕ್ಕೆ ಅರಿಶಿನ ಬೆರೆಸಿ ಪೇಸ್ಟ್ ಮಾಡಿ.ಅದನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಮುಖ ತೊಳೆದರೆ ಮೊಡವೆ ಕಲೆ ಮಾಯ.
2.ಹಾಲಿನ ಫೇಸ್ ಪ್ಯಾಕ್:
ಹಾಲಿಗೆ ಸ್ವಲ್ಪ ಅರಿಶಿನ ಬೆರೆಸಿ ಪೇಸ್ಟ್ ಮಾಡಿ.ನಂತರ ಒಂದು ಹತ್ತಿಯ ಸಹಾಯದಿಂದ ಮುಖಕ್ಕೆ ಮೆಸೇಜ್ ಮಾಡಿ. ಸುಮಾರು 15 ನಿಮಿಷ ಬಳಿಕ ಮುಖ ತೊಳೆದರೆ, ಮುಖ ಮೃದು ಆಗುತ್ತದೆ.
3. ಮೊಸರು ಮತ್ತು ಬಾಳೆ ಹಣ್ಣು ಫೇಸ್ ಪ್ಯಾಕ್
ಮೊಸರು ಮತ್ತು ಬಾಳೆ ಹಣ್ಣು ಚರ್ಮಕ್ಕೆ ಉತ್ತಮ ಪೋಷಣೆ ನೀಡುತ್ತದೆ. ಇವೆರದನ್ನೂ ಸಮ ಪ್ರಮಾಣದಲ್ಲಿ ಬೆರೆಸಿ 5ನಿಮಿಷ ಹಾಗೆ ಬಿಡಿ.ನಂತರ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಮುಖ ತೊಳೆಯುವುದು.
ಈ ಎಲ್ಲ ಫೇಸ್ ಪ್ಯಾಕ್ ಗಳನ್ನು ವಾರಕ್ಕೆ ಒಮ್ಮೆ ಮಾಡಿದರೆ ಸಾಕು.
ತೇಜಸ್ವಿನಿ ಆರ್ ಕೆ