Thursday , January 21 2021
Breaking News
Home / Khabar Exclusive ಕನ್ನಡ / ಮೊಸರನ್ನ ಮಾಡೋದು ಬಲು ಸುಲಭ

ಮೊಸರನ್ನ ಮಾಡೋದು ಬಲು ಸುಲಭ

ಬೇಕಾಗುವ ಸಾಮಾನುಗಳು

1/2 ಕಪ್ ಸೋನಾ ಮಸೂರಿ ಅಕ್ಕಿ

2 ಕಪ್ ಮೊಸರು

1/2 ಕಪ್ ಹಾಲು (ಮೊಸರು ಹುಳಿ ಇದ್ದರೆ ಮಾತ್ರ) 

1/2 ಚಮಚ ಸಾಸಿವೆ 

1 ಟೀಸ್ಪೂನ್ ಉದ್ದಿನ ಬೇಳೆ 

1 ಟೀಸ್ಪೂನ್ ಕಡಲೆಬೇಳೆ 

5 – 6 ಗೋಡಂಬಿ

4 – 5 ಕರಿಬೇವಿನ ಎಲೆ 

1 ಹಸಿರು ಮೆಣಸಿನಕಾಯಿ

ಒಂದು ಸೆಮೀ ಉದ್ದದ ಶುಂಠಿ ಸಣ್ಣಗೆ ಕತ್ತರಿಸಿದ್ದು

ಒಂದು ಚಿಟಿಕೆ ಇಂಗು

1 ಟೇಬಲ್ ಚಮಚ ಸಣ್ಣಗೆ ಕತ್ತರಿಸಿದ ಕೊತಂಬರಿ ಸೊಪ್ಪು

2 ಟೀ ಚಮಚ ಅಡುಗೆ ಎಣ್ಣೆ 

ಉಪ್ಪು ರುಚಿಗೆ ತಕ್ಕಷ್ಟು

ಮೊಸರನ್ನ ಮಾಡುವ ವಿಧಾನ:

*ಮೊದಲಿಗೆ ಮೆತ್ತಗಿನ ಅನ್ನ ಮಾಡಿಟ್ಟು ಕೊಳ್ಳಿ. 

*ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಗೋಡಂಬಿಯ ಒಗ್ಗರಣೆ ಮಾಡಿ. 

*ಸಾಸಿವೆ ಸಿಡಿದ ಮೇಲೆ ಕರಿಬೇವಿನ ಎಲೆ, ಸೀಳಿದ ಹಸಿರು ಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಇಂಗು ಹಾಕಿ.  ಈರುಳ್ಳಿ ಹಾಕಲು ಬಯಸಿದಲ್ಲಿ ಹಾಕಿ ಹುರಿಯಿರಿ (ನಾನು ಈರುಳ್ಳಿ ಹಾಕಲಿಲ್ಲ). 

*ಒಮ್ಮೆ ಕೈಯಾಡಿಸಿ ಸ್ಟವ್ ಆಫ್ ಮಾಡಿ. 

*ಮೆತ್ತಗೆ ಬೇಯಿಸಿಟ್ಟ ಅನ್ನ ಹಾಕಿ ಕಲಸಿ. ಅನ್ನ ಮೆತ್ತಗಿಲ್ಲವಾದಲ್ಲಿ ಸೌಟು ಅಥವಾ ಮಾಷೆರ್ ನಿಂದ ಮುದ್ದೆ ಮಾಡಿ. 

*ಅನ್ನ ಬೆಚ್ಚಗಾದ ಮೇಲೆ ಮೊಸರು ಹಾಕಿ. ಮೊಸರು ಹುಳಿ ಇದ್ದಲ್ಲಿ ಹಾಲನ್ನು ಸೇರಿಸಿ. ಕೊತಂಬರಿ ಸೊಪ್ಪು ಮತ್ತು ದಾಳಿಂಬೆಯಿಂದ (ದಾಳಿಂಬೆ ಬೇಕಾದಲ್ಲಿ) ಅಲಂಕರಿಸಿ.

ತೇಜಸ್ವಿನಿ ಆರ್ ಕೆ

Check Also

ಈ ಬಾರಿ ಸರಳ ದಸರಾ ಹಬ್ಬ

ಮೈಸೂರು,ಅ 9:ವಿಶ್ವವಿಖ್ಯಾತ ದಸರಾ ಮಹೋತ್ಸವದ ಉದ್ಘಾಟನೆಗೆ ಇನ್ನು 8 ದಿನ ಮಾತ್ರ ಬಾಕಿ ಉಳಿದಿವೆ. ಈ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ...

Leave a Reply

Your email address will not be published. Required fields are marked *