Sunday , January 17 2021
Breaking News
Home / Khabar Exclusive ಕನ್ನಡ / ನೆಲ್ಲಿಕಾಯಿಯ ಗುಣಗಳ ಬಲ್ಲವರಿಲ್ಲ

ನೆಲ್ಲಿಕಾಯಿಯ ಗುಣಗಳ ಬಲ್ಲವರಿಲ್ಲ

ನೆಲ್ಲಿಕಾಯಿಯಲ್ಲಿ ಹಲವಾರು ಔಷಧೀಯ ಗುಣಗಳಿವೆ, ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ನೆಲ್ಲಿಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಒಟ್ಟಿನಲ್ಲಿ ನೆಲ್ಲಿಕಾಯಿ ತಿನ್ನಲು ಸ್ವಾದಿಷ್ಠವೂ ಹೌದು, ಆರೋಗ್ಯ ವರ್ಧಕವೂ ಹೌದು ಮತ್ತು ಸೌಂದರ್ಯ ವರ್ಧಕವೂ ಹೌದು. ನೆಲ್ಲಿಕಾಯಿಯಿಂದ ಚರ್ಮದ ಕಾಂತಿ ಹೆಚ್ಚಿಸಿ, ಬಿಗಿಗೊಳಿಸುತ್ತದೆ, ಕೂದಲನ್ನು ಹೊಳೆಯುವಂತೆ ಮಾಡುತ್ತದೆ, ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ.

1.ನೆಲ್ಲಿಕಾಯಿಯಲ್ಲಿ ಹೇರಳವಾಗಿ ಸಿ ವಿಟಮಿನ್ ಇದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪಿತ್ತವನ್ನು ನಿಯಂತ್ರಿಸುತ್ತದೆ
2.ನೆಲ್ಲಿಕಾಯಿಯಲ್ಲಿ ವಿಟಮಿನ್‌ ಸಿ. ಕಬ್ಬಿಣ, ಕ್ಯಾಲ್ಸಿಯಂ ಅಮಶ ಹೇರಳವಾಗಿದೆ. ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ನೆಲ್ಲಿಕಾಯಿ ಕಾಪಾಡುತ್ತದೆ.
3.ಮುಖಕ್ಕೆ ನೆಲ್ಲಿಕಾಯಿ ಪುಡಿ, ಮೊಸರು ಮತ್ತು ಜೇನುತುಪ್ಪ ಮಿಶ್ರಣ ಮಾಡಿ ಮಾಸ್ಕ್‌ ಹಾಕಿಕೊಂಡ್ರೆ ಕಾಂತಿಯುಕ್ತವಾಗುತ್ತದೆ.
4.ನೆಲ್ಲಿಕಾಯಿ ಪುಡಿಯಲ್ಲಿ ಫೈಬರ್‌ ಅಂಶವಿರುವುದರಿಂದ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ, ಮಲಬದ್ದತೆಗೆ ಇದು ಅತ್ಯಂತ ಉತ್ತಮ ಮದ್ದು.
5. ಜೇನುತುಪ್ಪದ ಜೊತೆ ನೆಲ್ಲಿಕಾಯಿ ಪೌಡರ್‌ ಸೇರಿಸಿ ಸೇವಿಸಿದರೆ ರಕ್ತಶುದ್ದಿಯಾಗುತ್ತದೆ. ಬೆಲ್ಲದ ಜೊತೆಗೂ ಇದನ್ನು ತಿನ್ನಬಹುದು.
6.ನೆಲ್ಲಿಕಾಯಿ ಆಮ್ಲ ಜ್ಯೂಸ್ ರಸವನ್ನು ದಿನವೂ ಆಹಾರ ಕ್ರಮ ಮತ್ತು ವ್ಯಾಯಾಮದ ಜೊತೆಗೆ ನಿಯಮಿತವಾಗಿ ಸೇವಿಸುವ ಜೊತೆಗೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.
7.ನಿತ್ಯವೂ ನಿಯಮಿತವಾಗಿ ನೆಲ್ಲಿಕಾಯಿ ರಸವನ್ನು ಸೇವಿಸುವುದರಿಂದ ದೃಷ್ಟಿಕೋನವನ್ನು ಸುಧಾರಿಸಬಹುದು. ಇದರಲ್ಲಿ ಸಮೃದ್ಧವಾದ ವಿಟಮಿನ್ ಸಿ ಇರುವುದರಿಂದ ಕಣ್ಣಿನ ಸ್ನಾಯುಗಳು ಬಲವನ್ನು ಪಡೆದುಕೊಳ್ಳುವವು.

ತೇಜಸ್ವಿನಿ ಆರ್ ಕೆ

Check Also

ಈ ಬಾರಿ ಸರಳ ದಸರಾ ಹಬ್ಬ

ಮೈಸೂರು,ಅ 9:ವಿಶ್ವವಿಖ್ಯಾತ ದಸರಾ ಮಹೋತ್ಸವದ ಉದ್ಘಾಟನೆಗೆ ಇನ್ನು 8 ದಿನ ಮಾತ್ರ ಬಾಕಿ ಉಳಿದಿವೆ. ಈ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ...

Leave a Reply

Your email address will not be published. Required fields are marked *