Thursday , January 21 2021
Breaking News
Home / Khabar Exclusive ಕನ್ನಡ / ರಾಮಮಂದಿರ ಶಿಲಾನ್ಯಾಸಕ್ಕೆ ಉಡುಪಿಯ ಈ ವಸ್ತುಗಳು ರವಾನೆ

ರಾಮಮಂದಿರ ಶಿಲಾನ್ಯಾಸಕ್ಕೆ ಉಡುಪಿಯ ಈ ವಸ್ತುಗಳು ರವಾನೆ

ಆಗಸ್ಟ್ 5ರಂದು ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆಯಲಿದೆ. ದೇಶದ ಪವಿತ್ರ ಕ್ಷೇತ್ರಗಳಿಂದ ಮಣ್ಣು ಮತ್ತು ಪವಿತ್ರ ನದಿಗಳಿಂದ ನೀರು ಸಂಗ್ರಹ ಮಾಡಿ ಬಳಸಲಾಗುತ್ತಿದೆ.

ಉಡುಪಿಯ ನೀರು, ಶ್ರೀ ಕೃಷ್ಣನ ಪವಿತ್ರ ಭೂಮಿಯ ಮಣ್ಣನ್ನು ಬಳಸಲಾಗುತ್ತಿದೆ. ರವಾನೆ ಮಾಡುವ ಮೊದಲು ಉಡುಪಿಯ ಪವಿತ್ರ ಮಣ್ಣಿಗೆ ಅದಮಾರು ಈಶಪ್ರಿಯ ಶ್ರೀಗಳು ಪೂಜೆ ಸಲ್ಲಿಸಿ, ಕೃಷ್ಣನ ಗಂಧ ಪ್ರಸಾದ ಅರ್ಪಿಸಿ ಪ್ರಾರ್ಥಿಸಿದರು.


ಉಡುಪಿಯ ಪವಿತ್ರ ನೀರು ಮತ್ತು ಮಣ್ಣನ್ನು ಕೃಷ್ಣ ಮಠದ ಗರ್ಭಗುಡಿಯ ಮುಂಭಾಗ ಇಟ್ಟು ಪರ್ಯಾಯ ಸ್ವಾಮೀಜಿಯವರು ವಿಶೇಷ ಪೂಜೆ ನೆರವೇರಿಸಿದರು. ರಾಮಮಂದಿರ ನಿರ್ಮಾಣ ನಿರ್ವಿಘ್ನವಾಗಲಿ. ವಿಶ್ವದಾದ್ಯಂತ ಇರುವ ಕೋಟ್ಯಂತರ ಹಿಂದೂ ಭಕ್ತರ ಕನಸು ನನಸಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಆಗಸ್ಟ್ 5ರಂದು ನಡೆಯುವ ಮಂದಿರ ಶಿಲಾನ್ಯಾಸ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ದೇಶದ ಪವಿತ್ರ ಪ್ರಸಿದ್ಧ ಕ್ಷೇತ್ರಗಳಿಂದ ಬಂದ ನೀರು ಮತ್ತು ಮಣ್ಣನ್ನು ಶಿಲಾನ್ಯಾಸ ಸಂದರ್ಭ ಬಳಸಲಾಗುತ್ತದೆ. ಉಡುಪಿ ಕೃಷ್ಣನ ಗಂಧ ಪ್ರಸಾದವನ್ನು ಇಟ್ಟು ಶ್ರೀಗಳು ವಿಶ್ವ ಹಿಂದೂ ಪರಿಷತ್ ಮುಖಂಡರಿಗೆ ಹಸ್ತಾಂತರಿಸಿದರು.

Check Also

अंतर्राष्ट्रीय हिन्दू परिषद राष्ट्रीय बजरंग दल हथुआ विभाग द्वारा आज सैफ अली खान और डायरेक्टर अली अब्बास जफर का फूका पुतला

अमेजन प्राइम वीडियो की वेब सीरीज तांडव को लेकर अंतर्राष्ट्रीय हिन्दू परिषद राष्ट्रीय बजरंग दल ...

One comment

  1. ದೇಶದಲ್ಲಿ ಕೊರೋನ ಬಂದು ಜನ ತಿನ್ನಲಿಕ್ ಅನ್ನ .ಮಲಗಲಿಕ್ ಸ್ಥಳ. ಉಡಲಿಕ್ ಬಟ್ಟೆ. ಕುಡೀಲಿಕ್ಕೆ ನೀರು ಇಲ್ದೆ ಒದ್ದಾಡ್ತ ಇದ್ಥಾರೆ . ಅಂತವರಿಗೆ ಸಹಾಯ ಮಾಡಿ , ಅದನ್ನು ಬಿಟ್ಟು ಇಂತ ಸಂಕಷ್ಟ ಸಮಯದಲ್ಲಿ ನೀವು ದೇವಸ್ಥಾನ ಕಟ್ಟುವ ತರಾತುರಿಯ ನಿರ್ಧಾರ ಮಾಡಬೇಡಿ. ದೇಶದ ಜನತೆ ಕೊರೋನ ಬಂದು ಸಾಯುತಿರುವಾಗ ನೀವು ಯಾರಿಗಾಗಿ ದೇವಸ್ಥಾನ ಕಟ್ಟುವುದು. ಭಗವಂತ ಸರ್ವಾಂತರಯಾಮಿ. ಅವನಿಲ್ಲದ ಜಾಗವಿಲ್ಲ , ಜನ ಈ ಮಹಾಮಾರಿಯಿಂದ ಬಚಾವಾದರೆ ಇದಕ್ಕಿಂತ ದೊಡ್ಡ ಮಂದಿರ ಕಟ್ಟಬಹುದು. ಆತ್ಮ ಇದ್ದರೆ ಪರಮಾತ್ಮ, ಜನ ಸೇವೆಯೇ ಜನಾರ್ಧನ ಸೇವೆ.,,

Leave a Reply

Your email address will not be published. Required fields are marked *